ಹಾವೇರಿ: ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ದೊಡ್ಡ ಹನುಮಂತಪ್ಪ ನಿಂಗಪ್ಪ ರೀತಿ (60) ಎಂದು ಗುರುತಿಸಲಾಗಿದೆ. ಪತಿ-ಪತ್ನಿ ಇಬ್ಬರೂ ಹೊಲಕ್ಕೆ ತೆರಳಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಸಿಡಿಲು ಮಳೆ ಆರ್ಭಟ ಪ್ರಾರಂಭವಾಗಿದೆ ಈ ವೇಳೆ ಮನೆಗೆ ತೆರಳುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಹನುಮಂತಪ್ಪ ಅವರು ಮೃತಪಟ್ಟಿದ್ದು, ಪತ್ನಿ ರಸ್ತೆಯಲ್ಲಿ ಮುಂದೆ ಸಾಗಿದ್ದರಿಂದ ಅದೃಷ್ಟವಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸವಣೂರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.