ಬಂಕಾಪುರ : ಬಂಕಾಪುರ ನಗರದಲ್ಲಿ ವಾರದ ಸಂತೆಯನ್ನ ಗುರುವಾರ (08/10/2026) ಕ್ಕೆ ಮುಂದೂಡಲಾಗಿದೆ. ಶಿಗ್ಗಾಂವ ತಾಲೂಕಿನ ಬಂಕಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ 07/10/2026 (ಬುಧವಾರ) ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ ಅ. 6/07/2026 (ಮಂಗಳವಾರ) ರಂದು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ (ಪರೇಡ್) ನಡೆಸಲಿದೆ. ಪೊಲೀಸ್ ಪಥಸಂಚಲನದ ಕಾರಣದಿಂದಾಗಿ, ಮಂಗಳವಾರ ನಡೆಯಬೇಕಿದ್ದ ವಾರದ ಸಂತೆಯನ್ನು ಗುರುವಾರ ನಡೆಸಲು ಬಂಕಾಪುರ ಪುರಸಭೆ ಕಾರ್ಯಾಲಯ ತೀರ್ಮಾನಿಸಿದೆ. ನಗರದ ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ಬದಲಾವಣೆಯನ್ನು ಗಮನಿಸಿ ಪುರಸಭೆಯೊಂದಿಗೆ ಸಹಕರಿಸಬೇಕೆಂದು ಮುಖ್ಯಾಧಿಕಾರಿ ಮಲ್ಲೇಶ ಆರ್. ಪ್ರಕಟಣೆ ಮೂಲಕ ತಿಳಿಸಿದ್ದಾರೆ.