ಸವಣೂರು: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಯುವಕರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಊರಿನ ನಾಗರಿಕರೆಲ್ಲರೂ ಒಗ್ಗೂಡಿ ಕನ್ನಡದ ಬಾವುಟ ಹಿಡಿದು ಪಾಲ್ಗೊಂಡರು.ಕಾರ್ಯಕ್ರಮದ ಅಂಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹೂವಿನಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಕನ್ನಡಾಂಬೆಯ ಜಯಘೋಷಗಳೊಂದಿಗೆ ಯುವಕರ ಉತ್ಸಾಹ ಮುಗಿಲು ಮುಟ್ಟಿತ್ತು.ಮಂಜುನಾಥ್ ಕಾರಡಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಾರ್ ಕೊರವರ್, ಪ್ರಸನ್ನ ತಳವಾರ್, ಲಂಕೇಶ್, ಪವನ್, ರವಿ, ಬಸವರಾಜ್, ಪ್ರಕಾಶ್ ಸೇರಿದಂತೆ ಇನ್ನೂ ಹಲವಾರು ಯುವಕರು ಒಟ್ಟಾಗಿ ಸೇರಿ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಿದರು.