ಸ್ವಚ್ಛತೆ ಮರೆತ ಪುರಸಭೆ ಅಧಿಕಾರಿಗಳು ; ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಸದಸ್ಯರು
ಬಂಕಾಪುರ: ಪಟ್ಟಣದ ರಸ್ತೆಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಹೊಂದಿರುವ ಪುರಸಭೆ ಅಧಿಕಾರಿಗಳು ಸ್ವಚ್ಛತೆಯತ್ತ ಗಮನಹರಿಸದ ಹಿನ್ನೆಲೆಯಲ್ಲಿ, ಪುರಸಭೆ ಸದಸ್ಯರೇ ಸ್ವತಃ ರಸ್ತೆ ಸ್ವಚ್ಛಗೊಳಿಸುವ ಪರಿಸ್ಥಿತಿ ಬಂಕಾಪುರದಲ್ಲಿ ನಿರ್ಮಾಣವಾಗಿದೆ.
ಹೌದು. ಪಟ್ಟಣದ ಹಳ್ಳಿಕೇರಿ ಬಸವಣ್ಣ ದೇವಸ್ಥಾನದ ರಸ್ತೆಯ ಎರಡು ಬದಿ ಬೆಳೆದ ಗಿಡ ಕಂಟಿಗಳನ್ನು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ, ಪುರಸಭೆ ಸದಸ್ಯರಾದ ಸತೀಶ ಆಲದಕಟ್ಟಿ ಹಾಗೂ ಸುರೇಶ್ ಕುರಗೊಡಿ ಅವರು ಸ್ವಯಂಪ್ರೇರಿತರಾಗಿ ರಸ್ತೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕರ ಆರೋಗ್ಯ ಹಾಗೂ ಪಟ್ಟಣದ ಸ್ವಚ್ಛತೆಯನ್ನು ಕಾಪಾಡಬೇಕಾದ ಪುರಸಭೆ ಆಡಳಿತವೇ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.










