ತಡಸ : ಧಾರವಾಡದಿಂದ ಸವಣೂರು ಪಟ್ಟಣದ ಸತ್ಯಬೋಧಮಠಕ್ಕೆ ಹೊರಟ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರು ಪ್ರಯಾಣಿಸುತ್ತಿದ್ದ ಕಾರುರಾಷ್ಟ್ರೀಯ ಹೆದ್ದಾರಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸ್ವಾಮೀಜಿ ಸೇರಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಾರು ಜಖಂಗೊಂಡಿದೆ. ಇಲ್ಲಿನ ಇಲ್ಲಿನ ಪೂರ್ಣ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿಮ್ಮಾಪುರ ಗ್ರಾಮದ ಸಮೀಪ ಡಿವೈಡರಿಗೆ ರವಿವಾರ ರಾತ್ರಿ 1:30 ಸುಮಾರಿಗೆ ಈ ಅವಘಡ ಸಂಭವಿಸಿದೆ. ಸ್ವಾಮೀಜಿ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಶ್ರೀಗಳು ಆರೋಗ್ಯವಾಗಿದ್ದಾರೆ. ರವಿವಾರ ಸಂಜೆ ಧಾರವಾಡದಲ್ಲಿ ಚಾತುರ್ಮಾಸ್ಯ ಮುಗಿಸಿ ಬಳಿಕ ಎಂ.ಕೆ ಹುಬ್ಬಳ್ಳಿಗೆ ತೆರಳಿ ನರಸಿಂಹ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದ ತರುವಾಯ ಸವಣೂರಿಗೆ ತೆರಳುವಾಗ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ. ಆಗ ಚಾಲಕ ಕಾರು ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.