ಬೆಳಗಾವಿ: ಗಾಳಿಪಟ ಹಾರಿಸಲು ಬಳಸಿದ ಮಂಜಾ ದಾರ ತಗುಲಿ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ (ಅ. 26) ಸಂಜೆ ಬೆಳಗಾವಿ ನಗರದ ಕಪಿಲೇಶ್ವರ ಓವರ್ಬ್ರಿಡ್ಜ್ ಮೇಲೆ ನಡೆದಿದೆ.ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ ಭೀಮಸಿ ನಾಯಕ್ ಅವರು ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಸಂಜೆ ಸುಮಾರು 6 ಗಂಟೆಗೆ ಯಾರೋ ಹಾರಿಸಿದ ಗಾಳಿಪಟದ ಮಂಜಾ ದಾರ ತಗುಲಿ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಭೀಮಸಿ ನಾಯಕ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಂಜಾ ದಾರದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಇಂತಹ ದಾರ ಬಳಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ