ಹಾವೇರಿ: ಕಬ್ಬಿನ ಬೆಲೆ ನಿಗದಿಗಾಗಿ ಬೆಳ್ಳಿಗ್ಗೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬಂಕಾಪುರ ಟೋಲ್ ಬಳಿ ಟೆಂಟ್ ಹಾಕುವ ಮೂಲಕ ಅಹೋರಾತ್ರಿ ಧರಣಿ ಕೖೆಗೊಂಡಿದ್ದು, ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್ ಭೇಟಿ ನೀಡಿ, ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳು ಹಾಗೂ ಪ್ರತಿಭಟನೆಗೆ ಕಾರಣವಾದ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ರೈತರೊಂದಿಗೆ ಚರ್ಚಿಸಿದರು. ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಯಶೋಧಾ ವಂಟಗೂಡಿ ಕೂಡಾ ಬೆಳಿಗ್ಗೆಯಿಂದಲೇ ನಿಮ್ಮೊಂದಿಗೆ ನಾವಿದ್ದೇವೆ, ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡು ಸಂಚಾರವನ್ನು ಸುಗಮಗೊಳಿಸಿ ಎಂದು ರೈತರಲ್ಲಿ ಮನವಿ ಮಾಡಿದರು ಆದರೆ ರೈತರು ಇದಕ್ಕೆ ಒಪ್ಪಿಗೆ ನೀಡದೆ ನಮ್ಮ ಬೇಡಿಕೆ ಈಡೇರುವವರೆಗೆ ನಿರಂತರ ಪ್ರತಿಭಟನೆ ನಡೆಯಲಿದೆ ಎಂದರು. ನಿರಂತರ ಪ್ರತಿಭಟನೆ: ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ರೈತರು ಸ್ಪಷ್ಟಪಡಿಸಿದರು. ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದರು. ರಸ್ತೆಯಲ್ಲೇ ಅಡುಗೆ : ಅಹೋರಾತ್ರಿ ಪ್ರತಿಭಟನೆ ಮುಂದುವರಿಸಲು ರೈತರು ರಸ್ತೆಯಲ್ಲೇ ಅಡುಗೆ ಮಾಡಿಕೊಳ್ಳಲು ರೈತರು ಪಟ್ಟಿ ಹಾಕುವ ಮೂಲಕ ಸುಮಾರು ₹50 ಸಾವಿರ ಹಣ ಸಂಗ್ರಹಿಸಿ, ಅದರಿಂದ ಅಗತ್ಯ ಕಿರಾಣಿ ಸಾಮಗ್ರಿಗಳನ್ನು ಖರೀದಿಸಿ ರಸ್ತೆಯಲ್ಲೇ ಅಡುಗೆ ತಯಾರಿಸಿದರು. ಈ ವೇಳೆ ರೖೆತ ಸಂಘಟನೆಯ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ ಮಾತನಾಡಿ, ಕೇಂದ್ರ ಸರ್ಕಾರ ರೈತರನ್ನ ದೆಹಲಿಗೆ ಆಹ್ವಾನ ನೀಡಿ ರೈತ ಕುಲಕ್ಕೆ ಅವಮಾನಗೊಳಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತರನ್ನ ದೆಹಲಿಗೆ ಕರೆಸಿ ಅವಮಾನಗೊಳಿಸಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದರು. ಹಿರಿಯ ರೖೆತ ಮುಖಂಡ ಗಂಗಣ್ಣ ಹುಲ್ಲೂರ್, ಯುವ ರೖೆತ ಮುಖಂಡ ಪ್ರಶಾಂತ್ ಮುರಡಣ್ಣವರ ಸೇರಿದಂತೆ ಹಾವೇರಿ ಜಿಲ್ಲೆಯ ರೈತರು ಉಪಸ್ಥಿತರಿದ್ದರು.