ಬಂಕಾಪುರ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಸಾಲದ ವಾರದ ಬಡ್ಡಿ ಪಾವತಿಸದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಅಪಹರಿಸಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಣಿಕಂಠ ಹಳವಳ್ಳಿ ಎಂಬುವ ಯುವಕ ₹70 ಸಾವಿರ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲದ ವಾರದ ಬಡ್ಡಿ ಕಟ್ಟದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ನಾಲ್ಕು ದಿನಗಳ ಕಾಲ ಕೖೆ ಕಾಲು ಕಟ್ಟಿ ಹಾಕಿ ಪ್ರತಿ ದಿನ ಸಂಜೆ ತೆರಳಿ ಮಧ್ಯದ ಅಮಲಿನಲ್ಲಿ ದೇಹದ ಅಂಗಾಗಳಿಗೆ ಸಿಗರೇಟ್ ದಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಅಪರಿಚಿತ ವೃದ್ಧ ಯುವಕ ನರಳುತ್ತಿರುವುದು ಕಂಡು ಕಟ್ಟಿರುವ ಹಗ್ಗ ಬಿಚ್ಚಿದ್ದಾನೆ. ಬಳಿಕ ಮುಖ್ಯ ರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದಿರುವು ಕಂಡು ಆಸ್ಪತ್ರೆಗೆ ಸಾಗಿಸಿದ್ದು ತದನಂತರ ಮಾಹಿತಿ ಯುವಕ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾಲದ ಬಡ್ಡಿ ವಸೂಲಾತಿ ವಿಚಾರದಲ್ಲಿ ನಡೆದಿದೆಯೆನ್ನಲಾದ ಈ ಕೃತ್ಯದ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರಿಸಿಕೊಂಡಿದ್ದು, ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.