ಹಾವೇರಿ : ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಅಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಏಕಾ ಏಕಿ ಕೆಲಸದಿಂದ ಕೃೆ ಬಿಡುತ್ತಿರುವುದರಿಂದ ಬದುಕು ಬೀದಿಗೆ ಬಂದಿದೆ. ಹೌದು. ಕಳೆದ 5 ವರ್ಷಗಳಿಂದ ಎನ್.ಆರ್.ಎಲ್ ಎಮ್. ಯೋಜನೆ ಅಡಿ ಎಲ್ಲ ತಾಲೂಕು ಅಭಿಯಾನ ನಿರ್ವಹಣಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ವಲಯ ಮೇಲ್ವಿಚಾರಕರು ಮತ್ತು ಡಿಇಓ ಸೇರಿ ಒಟ್ಟು 15 ಜನರ ಬದುಕು ಈಗ ಬೀದಿಗೆ ಬಂದಿದೆ. ಹಾವೇರಿ ಜಿಲ್ಲಾ ಪಂಚಾಯತಿಯ ಸಿಇಒ ದಲ್ಜಿತ್ ಕುಮಾರ್ ಅವರು, ಈಗ ಕೆಲಸ ನಿರ್ವಹಿಸುತ್ತಿರುವ ಇರುವ ಸಿಬ್ಬಂದಿಗಳನ್ನು ಕೖೆ ಬಿಟ್ಟು ಹೊಸದಾಗಿ ಅರ್ಜಿ ಕರೆಯುವ ತಂತ್ರಗಾರಿಕೆ ಹೆಣೆದಿದ್ದು, ಅಷ್ಟು ಜನರು ಬದುಕು ಬಿದಿಗೆ ಬಂದಂತಾಗಿದೆ. ಈ ಬಗ್ಗೆ ಕೇಳಿದರೆ ನಿಯಮದ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈಗಾಗಲೇ ಎನ್. ಆರ್. ಎಲ್.ಎಮ್ ಯೋಜನೆ ಅಡಿ ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳಗುತ್ತಿಗೆಯರನ್ನು ಹೊರತುಪಡಿಸಿ ಕೇವಲ ಹೊರಗುತ್ತಿಗೆಯವರನ್ನು ಕೈ ಬಿಡುತ್ತಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆ ಅಡಿ ಅನೇಕ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ ಅವರೆಲ್ಲರೂ ಸಹ ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿಯಾಗಿರುತ್ತಾರೆ. ಯಾರನ್ನು ಸಹ ಕೈ ಬಿಡದೆ ಮುಂದುವರೆಸುತ್ತಾರೆ ಆದರೆ ಎನ್ ಆರ್ ಎಲ್ ಎಂ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮಾತ್ರ ಕೈಬಿಡುತ್ತಿರುವುದ್ದಾರೆ ಯಾಕೆ? ಎಂದು ನೊಂದ ಕೆಲಸ ಕಳೆದುಕೊಂಡ ಸಿಬ್ಬಂದಿಗಳು ಜನಸ್ಪರ್ಶ ಪತ್ರಿಕೆ ಎದುರು ಅಳಲು ತೊಡಿಕೊಂಡಿದ್ದಾರೆ. ವಿವಿಧ ಇಲಾಖೆಗಳಿಗಿಲ್ಲದ ನಿಯಮ ಎನ್ ಆರ್ ಎಲ್ ಎಮ್ ಯೋಜನೆಯಲ್ಲಿ ಏಕೆ..? : ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ವಸತಿ ಯೋಜನೆ, ನರೇಗಾ, ತಾಲೂಕ ಪಂಚಾಯತಿಯ ಡಿಇಓಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಡಿ ತಾತ್ಕಾಲಿಕ ಹೊರಗುತ್ತಿಗೆ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆಲ್ಲರಿಗೂ ಇಲ್ಲದ ರೂಲ್ಸ್ ಎನ್.ಆರ್. ಎಲ್. ಎಮ್ ಸಿಬ್ಬಂದಿಗಳಿಗೆ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆವಾಗುತ್ತಿದೆ. ಕಳೆದ 7 ತಿಂಗಳಿಂದಿಲ್ಲ ಗೌರವಧನ : ಎನ್.ಆರ್. ಎಲ್. ಎಮ್ ಯೋಜನೆ ಅಡಿ ಹೊರಗುತ್ತಿಗೆ ಹಾಗೂ ಒಳಗುತ್ತಿಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಒಳಗುತ್ತಿಗೆ ಸಿಬ್ಬಂದಿಗಳಿಗೆ 9 ತಿಂಗಳಿಂದ ಗೌರವ ಧನ ನೀಡಿಲ್ಲ. ಅದೇ ರೀತಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ 7 ತಿಂಗಳಿಂದ ಗೌರವಧನ ನೀಡಿಲ್ಲ. ಏಳು ತಿಂಗಳಿಂದ ಸಾಲ ಸೂಲ ಮಾಡುವ ಮೂಲಕ ಜೀವನ ನಡೆಸುತ್ತಾ ಬಂದಿದ್ದೆವೆ. ಇದರ ಮಧ್ಯೆಯೂ ಯಾವುದೇ ಕೆಲಸ ನಿಲ್ಲಿಸದೆ ಪ್ರಗತಿಯನ್ನು ಎಲ್ಲಾ ತಾಲೂಕು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾ ಬಂದಿದ್ದಿವೆ. ಅದರ ಮಧ್ಯೆ ಈಗ ಕೆಲಸದಿಂದ ಕೈಬಿಡುವ ಯೋಚನೆ ತಂದಿದ್ದು ಸಿಬ್ಬಂದಿಗಳನ್ನು ಸಂಕಷ್ಟಕ್ಕೆ ಗುರಿಯಾಗಿದ್ದೆವೆ ಎಂದು ಕೆಲಸ ಕಳೆದುಕೊಂಡ ಸಿಬ್ಬಂದಿಗಳು ಅಳಲು ತೊಡಿಕೊಂಡಿದ್ದಾರೆ. ರಾಜ್ಯದಲ್ಲಿಲ್ಲದ ನಿಯಮ ಹಾವೇರಿಯಲ್ಲಿ ಮಾತ್ರ : ಎನ್. ಆರ್. ಎಲ್. ಎಮ್. ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ ಇರುವಂತಹ ಸಿಬ್ಬಂದಿಗಳನ್ನು ಮುಂದುವರೆಸುತ್ತಾ ಬಂದಿರುತ್ತಾರೆ. ಆದರೆ ಹಾವೇರಿಯಲ್ಲಿ ಮಾತ್ರ ತಮ್ಮದೆಯಾದ ನಿಯಮಗಳ ಅಡಿ ಹುದ್ದೆ ಭರ್ತಿ ಮಾಡುತ್ತಿದ್ದಾರೆ. ಇರುವಂತ ಸಿಬ್ಬಂದಿಗಳನ್ನು ತೆಗೆದು ಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಲು ನೋಟಿಫಿಕೇಟಿನ್ ಮಾಡಲಾಗಿದೆ ಎಂದು ಕೆಲಸ ಕಳೆದುಕೊಂಡವರು ಅಳಲು ತೊಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಅಷ್ಟು ಜನರ ಬದುಕಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದು, ಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎನ್. ಆರ್. ಎಲ್. ಎಮ್ ಯೋಜನೆಯಡಿ ಗೌರವಧನ ನೀಡದಿದ್ದರು ಕೆಲಸ ನಿರ್ವಹಿಸುತ್ತಾ ಬಂದಿದ್ದೆವೆ. ಈಗ ಇರುವಂತ ಸಿಬ್ಬಂದಿಗಳನ್ನು ಬಿಟ್ಟು ಅರ್ಜಿ ಕರೆಯಬೇಕು. ಅಲ್ಲದೆ ಎಲ್ಲ ಇಲಾಖೆಯಲ್ಲಿ ಮಾಡುವಂತೆ ಈಗಿರುವವರನ್ನೆ ಮುಂದುವರೆಸಬೇಕು. ಇಲ್ಲದಿದ್ದರೆ ಕೆಲಸ ಕಳೆದುಕೊಂಡ ನಾವು ಕುಟುಂಬ ಸಮೇತ ಬಿದಿಗೆ ಬರಬೇಕಾಗುತ್ತೇ ಎಂದು ಕಣ್ಣಿರು ಹಾಕಿದ್ದಾರೆ.