ಬೆಳಗಾವಿ : ಅಕ್ರಮವಾಗಿ ಪೆಟ್ರೋಲ್, ಡಿಜೇಲ್ ಸಂಗ್ರಹಣೆ ಮಾಡಿರುವ ಹಿನ್ನಲೆ ಬೆಳಗಾವಿ ಪೊಲೀಸ್ ರು ದಾಳಿ ಮಾಡಿ, ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ತಮೀಮ ಹಸನಸಾಬ ಯರಗಟ್ಟಿ, ಸಾಕಿಬ ಶಮೀಮ ಅನ್ಸಾರಿ ಬಂಧಿತರು.
ಇಲ್ಲಿನ ದೇಸೂರ ಗ್ರಾಮದ ಹಾಟ್ ಪಾಟ್ ದಾಬಾ ಹತ್ತಿರ ದಾಳಿ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 900 ಲೀಟರ್ ಡಿಜೇಲ್ ಹಾಗೂ 900 ಪೆಟ್ರೋಲ್ ಸೇರಿ ಒಟ್ಟು 589000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


