ಚಿಕ್ಕೋಡಿ: ಹೈನುಗಾರಿಕೆಗಾಗಿ ಜಾನುವಾರು ಸಾಲ ಹಾಗೂ ರೈತರ ಜಮೀನಿನಲ್ಲಿ ಅಳವಡಿಸುವ ಸೋಲಾರ್ ಪಂಪಸೆಟ್ ಗಳಿಗೆ ಸಾಲ ನೀಡುವ ಉದ್ದೇಶದಿಂದ ನಬಾರ್ಡ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಾಲ ಕೂಡ ಮುಂದಿನ ದಿನಗಳಲ್ಲಿ ವಿತರಣೆ ಮಾಡಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ತಾಲೂಕಿನ ಜೈನಾಪುರ ಗ್ರಾಮದಲ್ಲಿ ಭಾನುವಾರ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಸಭಾಭವನ, ವಾಣಿಜ್ಯ ಮಳಿಗೆಗಳು ಹಾಗೂ ಪತ್ತ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಕರೆಗೆ 50 ಸಾವಿರ ರೂ. ಸಾಲ ನೀಡುವ ನಿರ್ಣಯ ಕೈಗೊಂಡಿದ್ದೇವೆ. ಮುಂದಿನ ಪತ್ತನಡಿ ಎಲ್ಲ ರೈತರು ಸಾಲ ನೀಡಲಾಗುವುದು. ಇದಕ್ಕೆ 700 ಕೋಟಿ ರೂ. ಹೆಚ್ಚುವರಿ ಹಣ ಒದಗಿಸಲಾಗುವುದು. ಇದರೊಂದಿಗೆ ಪ್ರತಿ ರೈತರಿಗೆ ನೀಡುವ 3 ರಿಂದ 5 ಲಕ್ಷ ರೂ. ಹೆಚ್ಚಿಗೆ ಮಾಡಲಾಗಿದೆ. ರೈತರಿಗೆ ಆರೋಗ್ಯ ವಿಮೆ ಕೂಡ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಪೈಪಲೈನ್ ಸಾಲ ಕೂಡ ಶೇ.3 ರ ಬಡ್ಡಿ ದರದಲ್ಲಿ ನೀಡುತ್ತಿದ್ದೇವೆ. ಬೇರೆಯೊಂದು ಬ್ಯಾಂಕಿಗೆ ಶೇ.12 ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ. ಸಾಲ ನೀಡಿ ರೈತರನ್ನು ಸಾಲಗಾರರಾಗಿ ಮಾಡುವುದಲ್ಲ. ಸಾಲ ಪಡೆರು ರೈತರು ಏಳಿಗೆಗೆ ಸಾಧಿಸಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು. ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀ ಶಿವಪ್ರಸಾದ ದೇವರು ಮಾತನಾಡಿ, ಅಧಿಕಾರ ಶಾಶ್ವತವಲ್ಲ. ನೇಗಿಲ ಯೋಗಿ ಮಾತ್ರ ಶಾಶ್ವತ. ಅನ್ನ ನೀಡುವ ದೇವರು ರೈತ. ಭೂಮಿಯಲ್ಲಿ ಏನ್ನೂ ಲಾಭವಿಲ್ಲ. ಆದರೂ ರೈತರು ಯಾವತ್ತು ಎಂದಿಗೂದುವುದಿಲ್ಲ. ಬಿಡಿಸಿಸಿ ಬ್ಯಾಂಕ್ ಮೂಲಕ ಅನೇಕ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಇದರ ಸೌಲಭ್ಯ ಪಡೆದುಕೊಂಡು ರೈತರು ಏಳಿಗೆ ಸಾಧಿಸಬೇಕು ಎಂದು ತಿಳಿಸಿದರು. ಶಾಸಕ ದುರ್ಯೋಧನ ಐಹೊಳೆ ಅವರು ಮಾತನಾಡಿ, ಈ ಸಹಕಾರಿ ಸಂಘಕ್ಕೆ 8 ಕೋಟಿ ಸಾಲ ಮಂಜೂರು ಮಾಡಿರುವುದರಿಂದ ಬಿಡಿಸಿಸಿ ಅಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸುಂದರವಾದ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ವಿಧಾನ ಪರಿಷತ್ತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಬಸವರಾಜ ಭಾತೆ, ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಸೊಲಬನ್ನವರ, ಉಪಾಧ್ಯಕ್ಷ ಬಸವರಾಜ ಮಾಳಗೆ, ನಿರ್ದೇಶಕರಾದ ಅಶೋಕ ಖಾಡ, ಅವಕ್ಕಾ ಜೋಗೆ, ಶಶಿಕಲಾ ಭಾಕರೆ, ಈರಪ್ಪಾ ಮಂಗಾಜ, ಬಾಬಾಸಾಬ ಘರಬುಡೆ, ಅಶೋಕ ನಿಂಗನೂರೆ, ಈರಗೌಡ ಸೊಲಬನ್ನವರ, ಗ್ರಾಪಂ ಸದಸ್ಯರಾದ ಬಾಳಕೃಷ್ಣ ದೊಡ್ಡಲಚ್ಚಪ್ಪಗೋಳ, ಕೃಷ್ಣಪ್ಪ ಜೋಗೆ, ಅನಿಲ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.